ಸುಸ್ವಾಗತ

ಇಜ್ಞಾನ ಟ್ರಸ್ಟ್ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯನ್ನು ಆಗಸ್ಟ್ ೩, ೨೦೧೬ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು.
ನಮ್ಮ ಧ್ಯೇಯ
  • ಸಾಮಾನ್ಯ ಜನರ ನಡುವೆ ವಿಜ್ಞಾನ-ತಂತ್ರಜ್ಞಾನಗಳನ್ನು ಜನಪ್ರಿಯಗೊಳಿಸುವುದು
  • ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗಾಗಿ ಶ್ರಮಿಸುವುದು
  • ಸಾರ್ವಜನಿಕ ಬಳಕೆಗಾಗಿ ವೆಬ್‍ಸೈಟ್ ಹಾಗೂ ಮೊಬೈಲ್ ಆಪ್‍ಗಳ ಮೂಲಕ ಶೈಕ್ಷಣಿಕ ಮಾಹಿತಿಯನ್ನು ಪ್ರಕಟಿಸುವುದು
  • ಮುದ್ರಿತ ಮತ್ತು/ಅಥವಾ ವಿದ್ಯುನ್ಮಾನ ಪುಸ್ತಕ - ಪತ್ರಿಕೆಗಳನ್ನು ಪ್ರಕಟಿಸುವುದು
  • ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮದ ಬಳಕೆಗಾಗಿ ಮಾಹಿತಿಪೂರ್ಣ ಬರಹಗಳನ್ನು ಒದಗಿಸುವುದು  
  • ಸಂಗತವಾದ ಮಾಹಿತಿಯನ್ನು ಕನ್ನಡದಿಂದ/ಕನ್ನಡಕ್ಕೆ ಅನುವಾದಿಸುವುದು
  • ತಂತ್ರಾಂಶಗಳನ್ನು, ಪೂರಕ ಮಾಹಿತಿಯನ್ನು ಲೋಕಲೈಸೇಶನ್ ಪ್ರಕ್ರಿಯೆಯ ಮೂಲಕ ಕನ್ನಡೀಕರಿಸುವುದು
  • ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸುವುದು
  • ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕ್ಷೇತ್ರ ಕುರಿತ ಚಟುವಟಿಕೆಗಳ ಬಗ್ಗೆ ವ್ಯಕ್ತಿಗಳೊಡನೆ, ಸಂಸ್ಥೆಗಳೊಡನೆ ಸಮಾಲೋಚಿಸುವುದು
  • ಮೇಲೆ ಸೂಚಿಸಿದ ಚಟುವಟಿಕೆಗಳಲ್ಲಿ ಇತರ ವ್ಯಕ್ತಿಗಳೊಡನೆ, ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳೊಡನೆ ಕೆಲಸಮಾಡುವುದು